iPadನಲ್ಲಿರುವ ಮ್ಯಾಗ್ನಿಫೈಯರ್ ಆ್ಯಪ್ನಲ್ಲಿ ನಿಮ್ಮ ಸುತ್ತಮುತ್ತಲಿನ ವಿಷಯಗಳನ್ನು ಮ್ಯಾಗ್ನಿಫೈ ಮಾಡಿ ಅಥವಾ ವಿವರಿಸಿ
ಮ್ಯಾಗ್ನಿಫೈಯರ್ ಆ್ಯಪ್ನಲ್ಲಿ, ನಿಮ್ಮ ಸುತ್ತಲಿನ ಪಠ್ಯ ಅಥವಾ ವಸ್ತುಗಳ ಮೇಲೆ ಝೂಮ್ ಇನ್ ಮಾಡಲು ನಿಮ್ಮ iPad ಅನ್ನು ಮ್ಯಾಗ್ನಿಫೈಯಿಂಗ್ ಗ್ಲಾಸ್ನಂತೆ ಬಳಸಬಹುದು.

ಹತ್ತಿರದ ಪಠ್ಯ ಅಥವಾ ವಸ್ತುಗಳನ್ನು ಮ್ಯಾಗ್ನಿಫೈ ಮಾಡಿ
ನಿಮ್ಮ iPadನಲ್ಲಿನ ಮ್ಯಾಗ್ನಿಫೈಯರ್
ಆ್ಯಪ್ಗೆ ಹೋಗಿ.ನೀವು ಮ್ಯಾಗ್ನಿಫೈ ಮಾಡಲು ಬಯಸುವ ಪಠ್ಯ ಅಥವಾ ವಸ್ತುವಿನ ಮೇಲೆ iPad ಕ್ಯಾಮರಾವನ್ನು ತೋರಿಸಿ, ನಂತರ ಝೂಮ್ ಇನ್ ಮಾಡಲು ಅಥವಾ ಝೂಮ್ ಔಟ್ ಮಾಡಲು ಸ್ಲೈಡರ್ ಅನ್ನು ಡ್ರ್ಯಾಗ್ ಮಾಡಿ.
ನೀವು ಈ ಕೆಳಗಿನ ಯಾವುದೇ ಡಿಫಾಲ್ಟ್ ಕಂಟ್ರೋಲ್ಗಳನ್ನು ಸಹ ಬಳಸಬಹುದು:
ಪುನರಾವರ್ತಿತ ಕಾರ್ಯಗಳು ಅಥವಾ ಸನ್ನಿವೇಶಗಳಿಗಾಗಿ ನೀವು ವ್ಯಾಖ್ಯಾನಿಸಿರುವ ನಿಮ್ಮ ಡಿಫಾಲ್ಟ್ ಕಂಟ್ರೋಲ್ಗಳು ಮತ್ತು ಕಸ್ಟಮ್ ಸೆಟ್ಗಳ ನಡುವೆ ಸ್ವಿಚ್ ಮಾಡಲು
ಅನ್ನು ಟ್ಯಾಪ್ ಮಾಡಿ ( ಚಟುವಟಿಕೆಗಳ ಎಂದು ಕರೆಯಲಾಗುತ್ತದೆ). ಚಟುವಟಿಕೆಯೊಂದಕ್ಕಾಗಿ ನಿಮ್ಮ ಆದ್ಯತೆಯ ಕಂಟ್ರೋಲ್ಗಳನ್ನು ಸೆಟ್ ಮಾಡಿ ಅನ್ನು ನೋಡಿ.ಫ್ರೇಮ್ ಅನ್ನು ತಾತ್ಕಾಲಿಕವಾಗಿ ಫ್ರೀಜ್ ಮಾಡಲು,
ಅನ್ನು ಟ್ಯಾಪ್ ಮಾಡಿ.ನಿಮ್ಮ ಸುತ್ತಮುತ್ತಲಿನ ಲೈವ್ ವಿವರಣೆಗಳನ್ನು ಪಡೆಯಿರಿ ಅಥವಾ “ನೀವು ರಚಿಸಿದ ಚಟುವಟಿಕೆಗಳನ್ನು ಎಡಿಟ್ ಮಾಡಿ” ಎಂಬುವನ್ನು ಸೇರಿದಂತೆ ಹೆಚ್ಚು ಕಂಟ್ರೋಲ್ಗಳನ್ನು ಸೇರಿಸಲು,
ಅನ್ನು ಟ್ಯಾಪ್ ಮಾಡಿ.
ಸಲಹೆ: ಕಂಟ್ರೋಲ್ ಸೆಂಟರ್ನಿಂದ ಅಥವಾ iPad ಬಟನ್ ಒಂದನ್ನು ಕ್ಲಿಕ್ ಮಾಡುವ ಮೂಲಕ ಮ್ಯಾಗ್ನಿಫೈಯರ್ ಅನ್ನು ತ್ವರಿತವಾಗಿ ತೆರೆಯಲು ಶಾರ್ಟ್ಕಟ್ ಅನ್ನು ಸೆಟಪ್ ಮಾಡಿ. ಆ್ಯಕ್ಸೆಸಬಿಲಿಟಿ ಫೀಚರ್ಗಳನ್ನು ತ್ವರಿತವಾಗಿ ಆನ್ ಅಥವಾ ಆಫ್ ಮಾಡಿ ಎಂಬುದನ್ನು ನೋಡಿ.
ಫ್ರೇಮ್ ಅನ್ನು ತಾತ್ಕಾಲಿಕವಾಗಿ ಫ್ರೀಜ್ ಮಾಡಿ
ಫ್ರೇಮ್ನಲ್ಲಿರುವುನ್ನು ನೀವು ಅದನ್ನು ಫೋಟೋಸ್ ಆ್ಯಪ್ನಲ್ಲಿ ಸೇವ್ ಮಾಡದೆಯೇ ತಾತ್ಕಾಲಿಕವಾಗಿ ಕ್ಯಾಪ್ಚರ್ ಮಾಡಬಹುದು.
ನಿಮ್ಮ iPadನಲ್ಲಿನ ಮ್ಯಾಗ್ನಿಫೈಯರ್
ಆ್ಯಪ್ಗೆ ಹೋಗಿ.
ಅನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:ಒಂದು ಅಥವಾ ಹೆಚ್ಚಿನ ಫೋಟೋಗಳನ್ನು ತೆಗೆದುಕೊಳ್ಳಿ:
ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಒಂದು ಫೋಟೋ ಅಥವಾ ಒಂದಕ್ಕಿಂತ ಹೆಚ್ಚು ಫೋಟೋಗಳನ್ನು ತೆಗೆದುಕೊಳ್ಳಲು ಸಿಂಗಲ್ ಫೋಟೋ ಅಥವಾ ಮಲ್ಟಿ-ಫೋಟೊ ಎಂಬುದನ್ನು ಆಯ್ಕೆಮಾಡಿ.ನೀವು ಮಲ್ಟಿ-ಫೋಟೊ ಎಂಬುದನ್ನು ಆಯ್ಕೆಮಾಡಿದರೆ, ಸ್ಕ್ರೀನ್ನ ಕೆಳಗಿನ ಬಲ ಮೂಲೆಯಲ್ಲಿ ನಿಮಗೆ ಫೋಟೋಗಳ ಒಂದು ಗುಂಪು ಕಾಣಿಸುತ್ತದೆ.
ಪಠ್ಯವನ್ನು ಕ್ಯಾಪ್ಚರ್ ಮಾಡಿ ಮತ್ತು ಅದನ್ನು ಮರುಫ್ರೇಮ್ ಮಾಡಿ:
ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಡಾಕ್ಯುಮಂಟ್ ಅನ್ನು ಆಯ್ಕೆಮಾಡಿ. ಫ್ರೇಮ್ನಲ್ಲಿ ಪಠ್ಯವನ್ನು ಪಡೆಯಲು, ಬರೆದಿರುವ ಮತ್ತು ಮಾತಿನ ರೂಪದಲ್ಲಿರುವ ಸೂಚನೆಗಳನ್ನು ಫಾಲೋ ಮಾಡಿ ಅಥವಾ ಪಠ್ಯದ ಸುತ್ತ ಕಾಣಿಸುವ ಬಾಕ್ಸ್ನ ಮೂಲೆಗಳನ್ನು ಡ್ರ್ಯಾಗ್ ಮಾಡಿ, ನಂತರ ಖಚಿತಪಡಿಸಿ ಎಂಬುದನ್ನು ಟ್ಯಾಪ್ ಮಾಡಿ.ನೀವು ಖಚಿತಪಡಿಸಿ ಎಂಬುದನ್ನು ಟ್ಯಾಪ್ ಮಾಡಿದ ನಂತರ, ಆ್ಯಕ್ಸೆಸಬಿಲಿಟಿ ರೀಡರ್ ಬಳಸಿ ಪಠ್ಯವನ್ನು ನೋಡಲು
ಅನ್ನು ಟ್ಯಾಪ್ ಮಾಡಿ. ಓದುವುದನ್ನು ಸುಲಭವಾಗಿಸಲು ಕ್ಯಾಪ್ಚರ್ ಮಾಡಲಾದ ಪಠ್ಯವನ್ನು ಒಂದು ಫಾರ್ಮ್ಯಾಟ್ನಲ್ಲಿ ನೋಡಿ ಮತ್ತು ನಿಮ್ಮ ಕ್ಯಾಪ್ಚರ್ ಮಾಡಲಾದ ಪಠ್ಯವನ್ನು ಆಲಿಸಿ ಎಂಬುದನ್ನು ನೋಡಿ.ಪಠ್ಯವನ್ನು ಕಸ್ಟಮೈಸ್ ಮಾಡಿ ಮತ್ತು ಆಲಿಸಿ: ನೀವು ಪಠ್ಯವನ್ನು ಮ್ಯಾಗ್ನಿಫೈ ಮಾಡುತ್ತಿದ್ದರೆ, ಓದುವುದನ್ನು ಸುಲಭವಾಗಿಸುವುದಕ್ಕಾಗಿ ಕ್ಯಾಪ್ಚರ್ ಮಾಡಿದ ಪಠ್ಯವನ್ನು ಒಂದು ಫಾರ್ಮ್ಯಾಟ್ನಲ್ಲಿ ನೋಡಲು ಅಥವಾ ನಿಮ್ಮ ಕ್ಯಾಪ್ಚರ್ ಮಾಡಲಾದ ಪಠ್ಯವನ್ನು ಆಲಿಸಲು,
ಅನ್ನು ಟ್ಯಾಪ್ ಮಾಡಿ.ಕ್ಯಾಪ್ಚರ್ ಮಾಡಿದ ಚಿತ್ರಗಳನ್ನು ಹಂಚಿಕೊಳ್ಳಿ: ಕ್ಯಾಪ್ಚರ್ ಮಾಡಲಾದ ಫ್ರೇಮ್ ಅನ್ನು ಹಂಚಿಕೊಳ್ಳುವುದು ಅಥವಾ ಅದನ್ನು ನಿಮ್ಮ ಫೋಟೋಗಳಲ್ಲಿ ಸೇವ್ ಮಾಡುವಂತಹ ಹೆಚ್ಚಿನ ಆಯ್ಕೆಗಳಿಗಾಗಿ
ಅನ್ನು ಟ್ಯಾಪ್ ಮಾಡಿ.ಕ್ಯಾಪ್ಚರ್ ಮಾಡಿದ ಚಿತ್ರಗಳನ್ನು ನೋಡುವುದನ್ನು ನಿಲ್ಲಿಸಿ: ಫ್ರೇಮ್ ಅನ್ನು ಅನ್ಫ್ರೀಜ್ ಮಾಡಲು ಮತ್ತು ಲೈವ್ ಮ್ಯಾಗ್ನಿಫೈಯರ್ ಲೆನ್ಸ್ಗೆ ಹಿಂದಿರುಗಲು
ಅನ್ನು ಟ್ಯಾಪ್ ಮಾಡಿ.
ಮ್ಯಾಗ್ನಿಫೈಯರ್ ಅನ್ನು ರೀಸೆಟ್ ಮಾಡಲು, ಯಾವುದೇ ಸಮಯದಲ್ಲಿ
ಅನ್ನು ಒತ್ತಿ ಹಿಡಿದುಕೊಂಡು ಡಾಕ್ಯುಮಂಟ್, ಮಲ್ಟಿ-ಫೋಟೋ ಅಥವಾ ಸಿಂಗಲ್-ಫೋಟೊವನ್ನು ಆಯ್ಕೆಮಾಡಿ.
ಸುಲಭವಾಗಿ ಓದಲು ನಿಮ್ಮ ಕ್ಯಾಪ್ಚರ್ ಪಠ್ಯವನ್ನು ಫಾರ್ಮ್ಯಾಟ್ನಲ್ಲಿ ನೋಡಿ
ಪಠ್ಯವನ್ನು ಒಳಗೊಂಡಿರುವ ಫ್ರೇಮ್ ಅನ್ನು ನೀವು ಮ್ಯಾಗ್ನಿಫೈ ಮಾಡಿದರೆ, ಸುಲಭವಾದ ಓದಿಗಾಗಿ ಹೊಂದಿಕೊಂಡಿರುವ ಫಾರ್ಮ್ಯಾಟ್ನಲ್ಲಿ ನೀವು ಅದನ್ನು ನೋಡಬಹುದು. ನೀವು ಫಾಂಟ್ಗಳು, ಲೇಔಟ್ಗಳು ಮತ್ತು ಹಿನ್ನೆಲೆ ಬಣ್ಣಗಳನ್ನು ಸಹ ಸರಿಹೊಂದಿಸಬಹುದು.
ನಿಮ್ಮ iPadನಲ್ಲಿನ ಮ್ಯಾಗ್ನಿಫೈಯರ್
ಆ್ಯಪ್ಗೆ ಹೋಗಿ.ಫ್ರೇಮ್ ಅನ್ನು ಕ್ಯಾಪ್ಚರ್ ಮಾಡಲು
ಅನ್ನು ಟ್ಯಾಪ್ ಮಾಡಿ, ನಂತರ
ಅನ್ನು ಟ್ಯಾಪ್ ಮಾಡಿ.ನೀವು ಕ್ಯಾಪ್ಚರ್ ಮಾಡಿದ ಫ್ರೇಮ್ನಲ್ಲಿ ಯಾವುದೇ ಪಠ್ಯ ಪತ್ತೆಯಾಗದಿದ್ದರೆ ಮ್ಯಾಗ್ನಿಫೈಯರ್ ನಿಮಗೆ ಎಚ್ಚರಿಸುತ್ತದೆ.
ಅನ್ನು ಟ್ಯಾಪ್ ಮಾಡಿ, ನಂತರ ರೀಡರ್ ಅನ್ನು ಕಸ್ಟಮೈಸ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.ಥೀಮ್ ಅನ್ನು ಆಯ್ಕೆಮಾಡಿ, ನಂತರ ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ.
ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:
ಪಠ್ಯದ ಬಣ್ಣ: ಬಣ್ಣವನ್ನು ಆರಿಸಿ ಅಥವಾ ಕಸ್ಟಮ್ ಬಣ್ಣ ಎಂಬುದನ್ನು ಟ್ಯಾಪ್ ಮಾಡಿ.
ಹಿನ್ನೆಲೆ ಬಣ್ಣ: ಬಣ್ಣವನ್ನು ಆರಿಸಿ ಅಥವಾ ಕಸ್ಟಮ್ ಬಣ್ಣ ಎಂಬುದನ್ನು ಟ್ಯಾಪ್ ಮಾಡಿ.
ಪಠ್ಯದ ಗಾತ್ರ: ಪಠ್ಯದ ಗಾತ್ರವನ್ನು ಚಿಕ್ಕದಾಗಿಸಲು ಅಥವಾ ದೊಡ್ಡದಾಗಿಸಲು ಸ್ಲೈಡರ್ ಅನ್ನು ಎಡಕ್ಕೆ ಅಥವಾ ಬಲಕ್ಕೆ ಡ್ರ್ಯಾಗ್ ಮಾಡಿ.
ಫಾಂಟ್: ಫಾಂಟ್ ಅನ್ನು ಆರಿಸಿ.
ಹೆಚ್ಚು ಸ್ಪಷ್ಟ ಅಕ್ಷರಗಳು: ಹೆಚ್ಚು ಸ್ಪಷ್ಟ ಅಕ್ಷರಗಳು ಎಂಬುದನ್ನು ಆನ್ ಮಾಡಿ.
ಗಮನಿಸಿ: ಸಿಸ್ಟಮ್ ಫಾಂಟ್ ಅನ್ನು ಬಳಸುವಾಗ ಮಾತ್ರ ಈ ಆಯ್ಕೆಯು ಲಭ್ಯವಿರುತ್ತದೆ.
ಬೋಲ್ಡ್ ಪಠ್ಯ: ಬೋಲ್ಡ್ ಪಠ್ಯವನ್ನು ಆನ್ ಮಾಡಿ.
ಸಾಲಿನ ಅಂತರ: ಸಾಲುಗಳ ನಡುವಿನ ಅಂತರವನ್ನು ಕಸ್ಟಮೈಸ್ ಮಾಡಲು
,
ಅಥವಾ
ಅನ್ನು ಆರಿಸಿ.ಪದದ ನಡುವಿನ ಅಂತರ: ಪದಗಳ ನಡುವಿನ ಅಂತರವನ್ನು ಕಸ್ಟಮೈಸ್ ಮಾಡಲು
,
ಅಥವಾ
ಅನ್ನು ಆರಿಸಿ.ಅಕ್ಷರಗಳ ನಡುವಿನ ಅಂತರ: ಅಕ್ಷರಗಳ ನಡುವಿನ ಅಂತರವನ್ನು ಕಸ್ಟಮೈಸ್ ಮಾಡಲು
,
ಅಥವಾ
ಅನ್ನು ಆರಿಸಿ.ಓದಬಹುದಾದ ಕಂಟೆಂಟ್ನ ವ್ಯಾಪ್ತಿ: ಪಠ್ಯದ ಅಗಲವನ್ನು ಕಸ್ಟಮೈಸ್ ಮಾಡಲು
,
, ಅಥವಾ
ಅನ್ನು ಆರಿಸಿ.ಹೈಪರ್ಲಿಂಕ್ಗಳು: ಲಿಂಕ್ಗಳನ್ನು ತೋರಿಸಿ ಎಂಬುದನ್ನು ಆನ್ ಅಥವಾ ಆಫ್ ಮಾಡಿ. ಆನ್ ಮಾಡಿದಾಗ, ನೀವು ಬಣ್ಣವನ್ನು ಕಸ್ಟಮೈಸ್ ಮಾಡಬಹುದು.
ಪ್ಲೇಬ್ಯಾಕ್: ಹೈಲೈಟ್ ಮಾಡುವುದನ್ನು ಆನ್ ಅಥವಾ ಆಫ್ ಮಾಡಿ. ಆನ್ ಮಾಡಿದಾಗ, ನೀವು ಶೈಲಿಯನ್ನು ಕಸ್ಟಮೈಸ್ ಮಾಡಬಹುದು ಅಥವಾ ಬಣ್ಣವನ್ನು ಹೈಲೈಟ್ ಮಾಡಬಹುದು.
ಮರುಹೆಸರಿಸಿ: ನೀವು ಆಯ್ಕೆಮಾಡುವ ಸೆಟ್ಟಿಂಗ್ಸ್ಗೆ ಹೆಸರನ್ನು ನಮೂದಿಸಿ.
ಡಿಫಾಲ್ಟ್ಗೆ ರೀಸೆಟ್ ಮಾಡಿ: ಎಲ್ಲಾ ಥೀಮ್ಗಳನ್ನು ಅವುಗಳ ಡಿಫಾಲ್ಟ್ ಸೆಟ್ಟಿಂಗ್ಸ್ಗೆ ರೀಸೆಟ್ ಮಾಡಿ.
ಸಲಹೆ: ನಿಮ್ಮ ಕಸ್ಟಮ್ ಸೆಟ್ಟಿಂಗ್ಸ್ನೊಂದಿಗೆ ಥೀಮ್ ಅನ್ನು ಮರುಹೆಸರಿಸಿ, ಇದರಿಂದ ನೀವು ಅದನ್ನು ಸುಲಭವಾಗಿ ಹುಡುಕಬಹುದು ಮತ್ತು ನಂತರ ಅದನ್ನು ಮರುಬಳಕೆ ಮಾಡಬಹುದು.
ಆ್ಯಪ್ಗಳಲ್ಲಿನ ಪಠ್ಯವನ್ನು ಕಸ್ಟಮೈಸ್ ಮಾಡಲು ನೀವು ಆ್ಯಕ್ಸೆಸಬಿಲಿಟಿ ರೀಡರ್ ಅನ್ನು ಸಹ ಬಳಸಬಹುದು. iPadನಲ್ಲಿ ಆಕ್ಸೆಸಬಿಲಿಟಿ ರೀಡರ್ ಹೊಂದಿರುವ ಆ್ಯಪ್ಗಳಲ್ಲಿ ಪಠ್ಯವನ್ನು ಓದುವುದು ಅಥವಾ ಆಲಿಸುವುದು ಅನ್ನು ನೋಡಿ.
ನೀವು ಕ್ಯಾಪ್ಚರ್ ಮಾಡಿದ ಪಠ್ಯವನ್ನು ಆಲಿಸುವುದು
ನಿಮ್ಮ iPadನಲ್ಲಿನ ಮ್ಯಾಗ್ನಿಫೈಯರ್
ಆ್ಯಪ್ಗೆ ಹೋಗಿ.ಫ್ರೇಮ್ ಅನ್ನು ಕ್ಯಾಪ್ಚರ್ ಮಾಡಲು
ಅನ್ನು ಟ್ಯಾಪ್ ಮಾಡಿ, ನಂತರ
ಅನ್ನು ಟ್ಯಾಪ್ ಮಾಡಿ.ನೀವು ಕ್ಯಾಪ್ಚರ್ ಮಾಡಿದ ಫ್ರೇಮ್ನಲ್ಲಿ ಯಾವುದೇ ಪಠ್ಯ ಪತ್ತೆಯಾಗದಿದ್ದರೆ ಮ್ಯಾಗ್ನಿಫೈಯರ್ ನಿಮಗೆ ಎಚ್ಚರಿಸುತ್ತದೆ.
ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:
ಪಠ್ಯವನ್ನು ಆಲಿಸಿ:
ಅನ್ನು ಟ್ಯಾಪ್ ಮಾಡಿ.ಪಠ್ಯವನ್ನು ವಿರಾಮಗೊಳಿಸಿ:
ಅನ್ನು ಟ್ಯಾಪ್ ಮಾಡಿ.ಹಿಂದಕ್ಕೆ ಅಥವಾ ಮುಂದಕ್ಕೆ ಸ್ಕಿಪ್ ಮಾಡಿ:
ಅಥವಾ
ಅನ್ನು ಟ್ಯಾಪ್ ಮಾಡಿ.ವೇಗವನ್ನು ಹೆಚ್ಚಿಸಿ ಅಥವಾ ಕಡಿಮೆ ಮಾಡಿ:
ಅನ್ನು ಟ್ಯಾಪ್ ಮಾಡಿ, ನಂತರ ವೇಗವೊಂದನ್ನು ಆಯ್ಕೆಮಾಡಿ.ನಿರ್ದಿಷ್ಟ ಸಮಯಕ್ಕೆ ಹೋಗಿ: ಸ್ಲೈಡರ್ ಅನ್ನು ಎಡಕ್ಕೆ ಅಥವಾ ಬಲಕ್ಕೆ ಡ್ರ್ಯಾಗ್ ಮಾಡಿ.
ಗಮನಿಸಿ: ನೀವು ಆಡಿಯೊ ಕಂಟ್ರೋಲ್ಗಳನ್ನು ಮರೆಮಾಡಬಹುದು ಅಥವಾ ತೋರಿಸಬಹುದು:
ಅನ್ನು ಟ್ಯಾಪ್ ಮಾಡಿ, ನಂತರ
ಅನ್ನು ಟ್ಯಾಪ್ ಮಾಡಿ.
ನಿಮ್ಮ ಸುತ್ತಮುತ್ತಲಿನ ಲೈವ್ ವಿವರಣೆಗಳನ್ನು ಪಡೆಯಿರಿ
ನೀವು ಅಂಧರಾಗಿದ್ದರೆ ಅಥವಾ ದೃಷ್ಟಿ ದೋಷವನ್ನು ಹೊಂದಿದ್ದರೆ, ನಿಮ್ಮ ಸುತ್ತಮುತ್ತಲನ್ನು ಸ್ಕ್ಯಾನ್ ಮಾಡಲು ಮತ್ತು ಕ್ಯಾಮರಾ ವೀಕ್ಷಣೆಯಲ್ಲಿ ಪತ್ತೆಹಚ್ಚಲಾದ ದೃಶ್ಯಗಳ ಲೈವ್ ವಿವರಣೆಗಳನ್ನು ಪಡೆಯಲು ನೀವು iPadನಲ್ಲಿರುವ ಮ್ಯಾಗ್ನಿಫೈಯರ್ ಆ್ಯಪ್ನಲ್ಲಿ ಪತ್ತೆಹಚ್ಚುವಿಕೆ ಮೋಡ್ ಅನ್ನು ಬಳಸಬಹುದು. ಲೈವ್ ವಿವರಣೆಗಳು ಪಠ್ಯ ಅಥವಾ ಮಾತಿನ ರೂಪದಲ್ಲಿ ಲಭ್ಯವಿವೆ.
ಪ್ರಮುಖ ಸೂಚನೆ: ಅಧಿಕ ಅಪಾಯದ ಅಥವಾ ತುರ್ತಿನ ಸಂದರ್ಭಗಳಲ್ಲಿ, ನಿಮಗೆ ಹಾನಿಯಾಗಿರಬಹುದಾದ ಅಥವಾ ಗಾಯವಾಗಿರಬಹುದಾದ ಸನ್ನಿವೇಶದಲ್ಲಿ ಅಥವಾ ನ್ಯಾವಿಗೇಷನ್ಗಾಗಿ ಡಿಟೆಕ್ಷನ್ ಮೋಡ್ ಅನ್ನು ಅವಲಂಬಿಸಬಾರದು.
ನಿಮ್ಮ iPadನಲ್ಲಿನ ಮ್ಯಾಗ್ನಿಫೈಯರ್
ಆ್ಯಪ್ಗೆ ಹೋಗಿ.ಡಿಟೆಕ್ಷನ್ ಮೋಡ್ ಅನ್ನು ಪ್ರಾರಂಭಿಸಲು
ಅನ್ನು ಟ್ಯಾಪ್ ಮಾಡಿ.ನಿಮಗೆ
ಕಾಣಿಸದಿದ್ದರೆ, ನೀವು ಅದನ್ನು ಸೇರಿಸಬಹುದು. ಕಂಟ್ರೋಲ್ಗಳನ್ನು ಕಸ್ಟಮೈಸ್ ಮಾಡಿ ಎಂಬುದನ್ನು ನೋಡಿ.
ಅನ್ನು ಒತ್ತಿ ಹಿಡಿದುಕೊಳ್ಳಿ, ದೃಶ್ಯಗಳನ್ನು ಆಯ್ಕೆಮಾಡಿ, ನಂತರ ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:ಬೆಂಬಲಿತ iPad ಮಾಡಲ್ಗಳಲ್ಲಿ, ನಿಮ್ಮ ಸಮೀಪದ ಬಾಗಿಲುಗಳು, ಜನರು ಮತ್ತು ಪೀಠೋಪಕರಣಗಳನ್ನು ಪತ್ತೆಹಚ್ಚಿ.
ಎಲ್ಲಾ iPad ಮಾಡಲ್ಗಳಲ್ಲಿ, ಕ್ಯಾಮರಾ ಫ್ರೇಮ್ನಲ್ಲಿನ ಪಠ್ಯವನ್ನು ಪತ್ತೆಮಾಡಿ ಮತ್ತು ಅದನ್ನು ಜೋರಾಗಿ ಓದಿ ಹೇಳುವಂತೆ ಮಾಡಿ ಅಥವಾ ನಿಮ್ಮ ಬೆರಳನ್ನು ಪಠ್ಯದ ಕಡೆ ತೋರಿಸುವ ಮೂಲಕ ಅದನ್ನು ಓದಿ ಹೇಳುವಂತೆ ಮಾಡಿ.
ಪತ್ತೆಹಚ್ಚುವಿಕೆಯನ್ನು ತಾತ್ಕಾಲಿಕವಾಗಿ ವಿರಾಮಗೊಳಿಸಲು, ಎರಡು ಬೆರಳುಗಳಿಂದ ಸ್ಕ್ರೀನ್ ಅನ್ನು ಡಬಲ್ ಟ್ಯಾಪ್ ಮಾಡಿ. ಪತ್ತೆಹಚ್ಚುವಿಕೆಯನ್ನು ಪುನರಾರಂಭಿಸಲು ಎರಡು ಬೆರಳುಗಳಿಂದ ಮತ್ತೊಮ್ಮೆ ಡಬಲ್ ಟ್ಯಾಪ್ ಮಾಡಿ. ಡಿಟೆಕ್ಷನ್ ಮೋಡ್ ಅನ್ನು ನಿಲ್ಲಿಸಲು,
ಅನ್ನು ಟ್ಯಾಪ್ ಮಾಡಿ.
ನೀವು VoiceOver ಅನ್ನು ಬಳಸಿದರೆ, ನೀವು iPadನ ಯಾವುದೇ ಸ್ಕ್ರೀನ್ನಿಂದ ಲೈವ್ ಗುರುತಿಸುವಿಕೆಯನ್ನು ಆನ್ ಮಾಡಬಹುದು ಮತ್ತು ಮ್ಯಾಗ್ನಿಫೈಯರ್ ಆ್ಯಪ್ಗೆ ಹೋಗದೇ ನಿಮ್ಮ ಸುತ್ತಮುತ್ತಲಿನ ಕುರಿತಾದ ವಿವರಣೆಗಳನ್ನು ಪಡೆಯಬಹುದು. VoiceOver ಮೂಲಕ ನಿಮ್ಮ ಸುತ್ತಮುತ್ತಲಿನ ಲೈವ್ ವಿವರಣೆಗಳನ್ನು ಪಡೆಯಿರಿ ಎಂಬುದನ್ನು ನೋಡಿ.