iPadನಲ್ಲಿನ ಸಂದೇಶ ಆ್ಯಪ್ ಮೂಲಕ ಪ್ರಾಜೆಕ್ಟ್ಗಳಲ್ಲಿ ಕೊಲಾಬೊರೇಟ್ ಮಾಡುವುದು
ಸಂದೇಶ ಆ್ಯಪ್ನಲ್ಲಿ
, ಪ್ರಾಜೆಕ್ಟ್ ಒಂದರಲ್ಲಿ ಕೊಲಾಬೊರೇಟ್ ಮಾಡುವುದಕ್ಕಾಗಿ ಜನರನ್ನು ಆಹ್ವಾನಿಸಲು ನೀವು ಪಠ್ಯ ಸಂದೇಶವನ್ನು ಕಳುಹಿಸಬಹುದು ಮತ್ತು ಸಂಭಾಷಣೆಯಲ್ಲಿರುವ ಪ್ರತಿಯೊಬ್ಬರನ್ನು ಡಾಕ್ಯುಮಂಟ್, ಸ್ಪ್ರೆಡ್ಶೀಟ್ ಅಥವಾ ಇತರ ಹಂಚಿಕೊಳ್ಳಲಾದ ಫೈಲ್ಗೆ ಸೇರಿಸಲಾಗುತ್ತದೆ.
ಗಮನಿಸಿ: ಸಂದೇಶ ಆ್ಯಪ್ನೊಂದಿಗೆ ಪ್ರಾಜೆಕ್ಟ್ ಒಂದರಲ್ಲಿ ಕೊಲಾಬೊರೇಟ್ ಮಾಡುವುದನ್ನು ಪ್ರಾರಂಭಿಸಲು, ನೀವು ಮತ್ತು ನಿಮ್ಮ ಸ್ವೀಕೃತದಾರರು iMessage ಅನ್ನು iOS 16, iPadOS 16, macOS 13, watchOS 9, visionOS 1, ಅಥವಾ ನಂತರದ ಆವೃತ್ತಿಗಳೊಂದಿಗೆ ಬಳಸುತ್ತಿರಬೇಕು ಹಾಗೂ ಇತರರು ಆಕ್ಸೆಸ್ ಮಾಡಬಹುದಾದ iCloud Driveನಂತಹ ಸ್ಥಳದಲ್ಲಿ ಕಂಟೆಂಟ್ ಅನ್ನು ಮೊದಲು ಸೇವ್ ಮಾಡಬೇಕು. iPad ಆ್ಯಪ್ಗಳಿಗಾಗಿ, ಅವುಗಳ ಕೊಲಾಬೊರೇಷನ್ ಫೀಚರ್ಗಳನ್ನು ಬಳಸಲು ನೀವು iCloud ಅನ್ನು ಆನ್ ಮಾಡಬೇಕಾಗಬಹುದು. iCloud ಬಳಕೆದಾರರ ಮಾರ್ಗದರ್ಶಿಯಲ್ಲಿರುವ ನಿಮ್ಮ ಎಲ್ಲಾ ಸಾಧನಗಳಲ್ಲಿ iCloud ಅನ್ನು ಸೆಟಪ್ ಮಾಡುವುದು ಎಂಬುದನ್ನು ನೋಡಿ.
ಕೊಲಾಬೊರೇಟ್ ಮಾಡಲು ಜನರನ್ನು ಆಹ್ವಾನಿಸುವುದು
ಬೇರೆ ಆ್ಯಪ್ನಿಂದ ಪ್ರಾಜೆಕ್ಟ್ ಒಂದರಲ್ಲಿ ಕೊಲಾಬೊರೇಟ್ ಮಾಡಲು ನೀವು ಜನರನ್ನು ಆಹ್ವಾನಿಸಬಹುದು ಮತ್ತು ನಂತರ ಸಂದೇಶ ಆ್ಯಪ್ನಲ್ಲಿ ನಿಮ್ಮ ಕಂಟೆಂಟ್ ಕುರಿತು ಚರ್ಚಿಸಬಹುದು. ಟಿಪ್ಪಣಿ, Freeform, ರಿಮೈಂಡರ್ಸ್, Safari, Keynote, Numbers, Pages ಮತ್ತು ಇತ್ಯಾದಿಗಳಂತಹ ಆ್ಯಪ್ಗಳಿಂದ ಫೈಲ್ಗಳನ್ನು ಹಂಚಿಕೊಳ್ಳಲು ನೀವು ಮೊದಲಿಗೆ ಅವುಗಳ ಕೊಲಾಬೊರೇಶನ್ ಫೀಚರ್ಗಳನ್ನು ಆನ್ ಮಾಡಿರಬೇಕು ಮತ್ತು ಇತರರು ಆ್ಯಕ್ಸೆಸ್ ಮಾಡಬಹುದಾದ iCloud Driveನಂತಹ ಸ್ಥಳದಲ್ಲಿ ಕಂಟೆಂಟ್ ಅನ್ನು ಸೇವ್ ಮಾಡಿರಬೇಕು.
ಕೊಲಾಬೊರೇಟ್ ಮಾಡಲು ಯಾರನ್ನಾದರೂ ಆಹ್ವಾನಿಸುವ ಪ್ರಕ್ರಿಯೆಯು ಆ್ಯಪ್ ಅನ್ನು ಅವಲಂಬಿಸಿರುತ್ತದೆ. ಬೆಂಬಲಿತ ಆ್ಯಪ್ ಒಂದರಲ್ಲಿ ಕೊಲಾಬೊರೇಷನ್ ಅನ್ನು ಪ್ರಾರಂಭಿಸುವ ಒಂದು ವಿಧಾನ ಹೀಗಿದೆ:
ನೀವು ಹಂಚಿಕೊಳ್ಳಲು ಬಯಸುವ ಫೈಲ್ ಅನ್ನು ಆಯ್ಕೆ ಮಾಡಿ, ನಂತರ
ಅನ್ನು ಟ್ಯಾಪ್ ಮಾಡಿ ಅಥವಾ ಕೊಲಾಬೊರೇಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.ಕೊಲಾಬೊರೇಟ್ ಮಾಡಿ (ಕಾಪಿಯನ್ನು ಕಳುಹಿಸಿ ಎಂಬುದರ ಬದಲು) ಎಂಬುದನ್ನು ಆಯ್ಕೆಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ, ನಂತರ ನೀವು ಯಾವ ಗುಂಪು ಅಥವಾ ವ್ಯಕ್ತಿಯ ಜೊತೆ ಕೊಲಾಬೋರೇಟ್ ಮಾಡಲು ಬಯಸುತ್ತೀರೋ ಅವರನ್ನು ಟ್ಯಾಪ್ ಮಾಡಿ. ಗುಂಪು ಅಥವಾ ವ್ಯಕ್ತಿಯನ್ನು ಪಟ್ಟಿ ಮಾಡಿರುವುದು ನಿಮಗೆ ಕಾಣಿಸದಿದ್ದರೆ,
ಅನ್ನು ಟ್ಯಾಪ್ ಮಾಡಿ.ಸಲಹೆಯಾಗಿ ತೋರಿಸಲಾದ ಐಕಾನ್ಗಳು ಸಕ್ರಿಯ FaceTime ಕರೆಗಳಿಗೆ ಅಥವಾ ಸಂದೇಶ ಆ್ಯಪ್ನ ಇತ್ತೀಚಿನ ಸಂಭಾಷಣೆಗಳನ್ನು ಹೊಂದಿರುವ ಗುಂಪುಗಳು ಅಥವಾ ವ್ಯಕ್ತಿಗಳಿಗೆ ಅನುಗುಣವಾಗಿರಬಹುದು.
ಸಂದೇಶ ಆ್ಯಪ್ನ ಸಂಭಾಷಣೆಯು ಕಳುಹಿಸಲು ಸಿದ್ಧವಾಗಿರುವ ಆಹ್ವಾನದೊಂದಿಗೆ ತೆರೆದುಕೊಳ್ಳುತ್ತದೆ. ಟಿಪ್ಪಣಿಯನ್ನು ಸೇರಿಸಿ (ಐಚ್ಛಿಕ), ನಂತರ
ಅನ್ನು ಟ್ಯಾಪ್ ಮಾಡಿ.

ನೀವು ಸಂದೇಶ ಆ್ಯಪ್ನಲ್ಲಿ ಭಾಗವಹಿಸುವವರನ್ನು ಆಹ್ವಾನಿಸಿದ ನಂತರ, ನೀವು ಬೇರೊಂದು ಆ್ಯಪ್ನಲ್ಲಿ ಪ್ರಾಜೆಕ್ಟ್ ಕುರಿತು ಕೆಲಸ ಮಾಡಬಹುದು ಮತ್ತು ಆ ಅ್ಯಪ್ನಲ್ಲಿರುವ ಕೊಲಾಬೊರೇಟ್ ಬಟನ್ ಅನ್ನು ಟ್ಯಾಪ್ ಮಾಡಿ, ಸಂದೇಶ ಆ್ಯಪ್ನ ಸಂಭಾಷಣೆಗೆ ಹಿಂತಿರುಗಬಹುದು.
ಯಾರಾದರೂ ಫೈಲ್ ಅನ್ನು ಎಡಿಟ್ ಮಾಡಿದಾಗ, ನೀವು ಸಂದೇಶ ಆ್ಯಪ್ನ ಥ್ರೆಡ್ನ ಮೇಲ್ಭಾಗದಲ್ಲಿ ಅಪ್ಡೇಟ್ಗಳನ್ನು ನೋಡುತ್ತೀರಿ. ಹಂಚಿಕೊಂಡ ಪ್ರಾಜೆಕ್ಟ್ಗೆ ಮರಳಲು ಮತ್ತು ಬದಲಾವಣೆಗಳನ್ನು ನೋಡಲು, ಅಪ್ಡೇಟ್ ಒಂದನ್ನು ಟ್ಯಾಪ್ ಮಾಡಿ.
ಗಮನಿಸಿ: ಹಂಚಿಕೊಂಡ ಐಟಂನೊಂದಿಗೆ ಸಂವಹನ ನಡೆಸುವ ಅಥವಾ ಯಾವುದೇ ಅಪ್ಡೇಟ್ಗಳನ್ನು ನೋಡುವ ಮೊದಲು ನಿಮ್ಮ ಸಹಭಾಗಿಗಳು ನಿಮ್ಮ ಆಹ್ವಾನವನ್ನು ಸ್ವೀಕರಿಸಬೇಕಾಗಬಹುದು ಅಥವಾ ಅದಕ್ಕೆ ಸೇರಿಕೊಳ್ಳಬೇಕಾಗಬಹುದು.
ಸಲಹೆ: ಸ್ಪ್ಲಿಟ್ ಸ್ಕ್ರೀನ್ನಲ್ಲಿ ನಿಮ್ಮ ಫೈಲ್ಸ್ ಆ್ಯಪ್ ಮತ್ತು ಸಂದೇಶ ಆ್ಯಪ್ ತೆರೆದಿರುವಾಗ, ನೀವು ಫೈಲ್ ಒಂದನ್ನು ‘ಹೊಸ ಸಂದೇಶ’ ವಿಂಡೋಗೆ ಡ್ರ್ಯಾಗ್ ಮಾಡುವ ಮೂಲಕ ಮತ್ತು ಕಳುಹಿಸುವ ಮೊದಲು ಪಾಪ್-ಅಪ್ ಮೆನುವಿನಲ್ಲಿ ಕೊಲಾಬೊರೇಟ್ ಮಾಡಿ ಎಂಬುದನ್ನು ಆಯ್ಕೆ ಮಾಡುವ ಮೂಲಕ ಕೊಲಾಬೊರೇಷನ್ ಅನ್ನು ಪ್ರಾರಂಭಿಸಬಹುದು.
ಸಂದೇಶ ಆ್ಯಪ್ನಲ್ಲಿನ ಪ್ರಾಜೆಕ್ಟ್ನಲ್ಲಿ ಕೊಲಾಬೊರೇಟ್ ಮಾಡುವುದು
ನಿಮ್ಮ ಪ್ರಾಜೆಕ್ಟ್ ಅನ್ನು ನೀವು ಹಂಚಿಕೊಂಡ ನಂತರ, ಯಾರಾದರೂ ಎಡಿಟ್ ಮಾಡಿದಾಗ ನೀವು ಸಂದೇಶ ಆ್ಯಪ್ನ ಸಂಭಾಷಣೆಯ ಮೇಲ್ಭಾಗದಲ್ಲಿ ಚಟುವಟಿಕೆಯ ಅಪ್ಡೇಟ್ಗಳನ್ನು ನೋಡುತ್ತೀರಿ.
ನಿಮ್ಮ iPadನಲ್ಲಿರುವ ಸಂದೇಶ ಆ್ಯಪ್ಗೆ
ಹೋಗಿ.ನೀವು ಕೊಲಾಬೊರೇಟ್ ಮಾಡುವುದನ್ನು ಪ್ರಾರಂಭಿಸಿರುವ ಪ್ರಾಜೆಕ್ಟ್ಗೆ ಆಹ್ವಾನವನ್ನು ಒಳಗೊಂಡಿರುವ ಸಂಭಾಷಣೆಗೆ ಹೋಗಿ, ನಂತರ ಪ್ರಾಜೆಕ್ಟ್ಗೆ ಹಿಂತಿರುಗಲು ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:
ನಿಮ್ಮ ಸಂಭಾಷಣೆಯಲ್ಲಿರುವ ಫೈಲ್ ಅನ್ನು ತೆರೆಯಲು ಅದನ್ನು ಟ್ಯಾಪ್ ಮಾಡಿ.
ಸಂಭಾಷಣೆಯ ಮೇಲ್ಭಾಗದಲ್ಲಿ ನಿಮಗೆ ಅಪ್ಡೇಟ್ ಕಾಣಿಸಿದರೆ, ತೋರಿಸಿ ಎಂಬುದನ್ನು ಟ್ಯಾಪ್ ಮಾಡಿ.
ಸ್ಕ್ರೀನ್ನ ಮೇಲ್ಭಾಗದಲ್ಲಿರುವ, ಸಹಭಾಗಿಯ ಅಥವಾ ಗುಂಪಿನ ಐಕಾನ್ ಅನ್ನು ಟ್ಯಾಪ್ ಮಾಡಿ, ಕೊಲಾಬೊರೇಶನ್ ಎಂಬುದಕ್ಕೆ ಸ್ಕ್ರೋಲ್ ಮಾಡಿ, ನಂತರ ಹಂಚಿಕೊಂಡ ಪ್ರಾಜೆಕ್ಟ್ ಅನ್ನು ಟ್ಯಾಪ್ ಮಾಡಿ.
ನೀವು ಪ್ರಾಜೆಕ್ಟ್ನಲ್ಲಿ ಯಾವುದೇ ಬದಲಾವಣೆಗಳನ್ನು ಅಥವಾ ಎಡಿಟ್ಗಳನ್ನು ಮಾಡಿದಾಗ, ನಿಮ್ಮ ಸಹಭಾಗಿಗಳು ಸಂಭಾಷಣೆಯಲ್ಲಿ ಅಪ್ಡೇಟ್ಗಳನ್ನು ಪಡೆಯುತ್ತಾರೆ.
ಗಮನಿಸಿ: ನೀವು ಹೊಸ ವ್ಯಕ್ತಿಯನ್ನು ಗುಂಪು ಸಂಭಾಷಣೆಗೆ ಸೇರಿಸಿದರೆ, ನೀವು ಕೊಲಾಬೊರೇಟ್ ಮಾಡುತ್ತಿರುವ ಪ್ರಾಜೆಕ್ಟ್ಗಳಿಗೆ ಅವರಿಗೆ ಆ್ಯಕ್ಸೆಸ್ ನೀಡಬೇಕು. ಅವರನ್ನು ಗುಂಪು ಸಂಭಾಷಣೆಗೆ ಇತ್ತೀಚೆಗೆ ಸೇರಿಸಿದ್ದರೆ, ಅವರನ್ನು ಸೇರಿಸಲು ನೀವು ಸ್ಕ್ರೀನ್ನ ಮೇಲ್ಭಾಗದಲ್ಲಿರುವ ನೋಟಿಫಿಕೇಷನ್ ಅನ್ನು ಟ್ಯಾಪ್ ಮಾಡಬಹುದು. ಅಥವಾ ಕೊಲಾಬೊರೇಟ್ ಮಾಡಲು ಅವರನ್ನು ಆಹ್ವಾನಿಸಿ.
ಕೊಲಾಬೊರೇಶನ್ ಮತ್ತು ಗುಂಪನ್ನು ನಿರ್ವಹಿಸುವುದು
ನೀವು ಸಂದೇಶ ಆ್ಯಪ್ನ ಸಂಭಾಷಣೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಜನರೊಂದಿಗೆ ಪ್ರಾಜೆಕ್ಟ್ ಅನ್ನು ಹಂಚಿಕೊಂಡರೆ, ನೀವು ಸಹಭಾಗಿಗಳನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು.
ನಿಮ್ಮ iPadನಲ್ಲಿರುವ ಸಂದೇಶ ಆ್ಯಪ್ಗೆ
ಹೋಗಿ.ನೀವು ನಿರ್ವಹಿಸಲು ಬಯಸುವ ಸಂಭಾಷಣೆಗೆ ಹೋಗಿ, ನಂತರ ಗುಂಪಿನ ಸಂಭಾಷಣೆಯ ಕುರಿತಾದ ವಿವರಗಳನ್ನು ತೆರೆಯಲು ಸಂಭಾಷಣೆಯ ಮೇಲ್ಭಾಗದಲ್ಲಿರುವ ಗುಂಪಿನ ಐಕಾನ್ ಅನ್ನು ಟ್ಯಾಪ್ ಮಾಡಿ.
ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:
ಹೊಸ ಭಾಗವಹಿಸುವವರನ್ನು ಸೇರಿಸಿ: ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸಂಪರ್ಕಗಳನ್ನು ಸೇರಿಸಿ. (ಸೇರಿಸಿ ಎಂಬುದನ್ನು ನೋಡಲು ನೀವು ಕೆಳಗೆ ಸ್ಕ್ರೋಲ್ ಮಾಡಬೇಕಾಗಬಹುದು.)
ನೀವು ಕೇವಲ ಒಬ್ಬರು ಇತರ ವ್ಯಕ್ತಿಯೊಂದಿಗೆ ಕೊಲಾಬೊರೇಟ್ ಮಾಡಲು ಪ್ರಾರಂಭಿಸಿದ್ದರೆ, ಕೊಲಾಬೊರೇಶನ್ಗೆ ಜನರನ್ನು ಸೇರಿಸಲು ನೀವು ಹೊಸ ಸಂಭಾಷಣೆಯನ್ನು ಪ್ರಾರಂಭಿಸಬೇಕಾಗುತ್ತದೆ.
ಗಮನಿಸಿ: ಸಹಭಾಗಿಗಳು ಸೇರಿಕೊಳ್ಳುವ ಮೊದಲು ನೀವು ಸಂಭಾಷಣೆಯಲ್ಲಿ ಹಂಚಿಕೊಂಡ ಯಾವುದೇ ಫೈಲ್ಗಳಿಗೆ ಅವರನ್ನು ಸೇರಿಸಬೇಕು. ನೀವು ಭಾಗವಹಿಸುವವರನ್ನು ಸೇರಿಸುವಾಗ, ಸಂಭಾಷಣೆಯ ಮೇಲ್ಭಾಗದಲ್ಲಿ ನೋಟಿಫಿಕೇಷನ್ ಕಾಣಿಸಿಕೊಳ್ಳುತ್ತದೆ. ನೀವು ಹೊಸ ಸಹಭಾಗಿಗಳನ್ನು ಸೇರಿಸಬಹುದಾದ, ಈ ಹಿಂದೆ ಹಂಚಿಕೊಂಡ ಫೈಲ್ಗಳನ್ನು ಪರಿಶೀಲಿಸಲು ನೋಟಿಫಿಕೇಷನ್ನಲ್ಲಿ ತೋರಿಸಿ ಎಂಬುದನ್ನು ಟ್ಯಾಪ್ ಮಾಡಿ.
ಸಂಭಾಷಣೆಯಿಂದ ಭಾಗವಹಿಸುವ ಒಬ್ಬರನ್ನು ತೆಗೆದುಹಾಕಿ: ಅವರ ಐಕಾನ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಗುಂಪಿನಿಂದ ತೆಗೆದುಹಾಕಿ ಎಂಬುದನ್ನು ಟ್ಯಾಪ್ ಮಾಡಿ.
ಪ್ರಮುಖ ಸೂಚನೆ: ಕೊಲಾಬೊರೇಶನ್ ನಡೆಯುವ ಆ್ಯಪ್ಗಳು ಸಾಮಾನ್ಯವಾಗಿ ಪ್ರಾಜೆಕ್ಟ್ಗೆ ಆ್ಯಕ್ಸೆಸ್ ಅನ್ನು ನಿಯಂತ್ರಿಸುತ್ತವೆ. ವೀಕ್ಷಣೆ ಅಥವಾ ಎಡಿಟಿಂಗ್ ಸವಲತ್ತುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಆ್ಯಪ್ನಲ್ಲಿಯೇ ಭಾಗವಹಿಸುವವರ ಆ್ಯಕ್ಸೆಸ್ ಅನ್ನು ಪರಿಶೀಲಿಸಿ.
ಸಂದೇಶ ಆ್ಯಪ್ನ ಕೊಲಾಬೊರೇಶನ್ನಲ್ಲಿರುವ ಜನರ ಗುಂಪು ಮತ್ತು ಫೈಲ್ನಲ್ಲಿ ಕೊಲಾಬೊರೇಟ್ ಮಾಡುತ್ತಿರುವ ಗುಂಪು ಹೋಲಿಕೆಯಾಗದೇ ಇರಬಹುದು. ಉದಾಹರಣೆಗೆ, ನೀವು ಸಂದೇಶ ಆ್ಯಪ್ನ ಹೊರಗೆ ಆ ಫೈಲ್ನಲ್ಲಿ ಕೊಲಾಬೊರೇಟ್ ಮಾಡಲು ಜನರನ್ನು ಆಹ್ವಾನಿಸಬಹುದು. ಅಥವಾ ನೀವು ಸಂದೇಶ ಆ್ಯಪ್ನಲ್ಲಿ ತನ್ನದೇ ಆದ ಕೊಲಾಬೊರೇಶನ್ ಸಂಭಾಷಣೆ ಹೊಂದಿರುವಂತಹ ಎರಡು ವಿಭಿನ್ನ ಗುಂಪುಗಳನ್ನು ಹೊಂದಿರಬಹುದು.
ನೀವು ಈ ಮೊದಲು ಇತರರೊಂದಿಗೆ ಹಂಚಿಕೊಂಡ ಡಾಕ್ಯುಮಂಟ್ಗೆ ಯಾರನ್ನಾದರೂ ಸೇರಿಸಿದಾಗ, ಅವರನ್ನು ಅಸ್ತಿತ್ವದಲ್ಲಿರುವ ಸಂಭಾಷಣೆಗೆ ಸೇರಿಸುವ ಅಥವಾ ಸಂಭಾಷಣೆಗಳನ್ನು ಪ್ರತ್ಯೇಕವಾಗಿ ಇರಿಸುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ. ಸಂಭಾಷಣೆಗೆ ಸೇರಿಸಲಾದ ಜನರಿಗೆ ಸಂಭಾಷಣೆಗೆ ಸೇರುವ ಮೊದಲು ಕಳುಹಿಸಲಾದ ಸಂದೇಶಗಳನ್ನು ಓದಲು ಸಾಧ್ಯವಾಗುವುದಿಲ್ಲ.
ಸಂದೇಶ ಆ್ಯಪ್ನಲ್ಲಿ ಪ್ರಾಜೆಕ್ಟ್ ಒಂದರಲ್ಲಿ ಕೊಲಾಬೊರೇಟ್ ಮಾಡುವುದನ್ನು ನಿಲ್ಲಿಸುವುದು
ಕೊಲಾಬೊರೇಶನ್ ನಡೆಯುವ ಆ್ಯಪ್ಗಳು ಸಾಮಾನ್ಯವಾಗಿ ಪ್ರಾಜೆಕ್ಟ್ಗೆ ಆ್ಯಕ್ಸೆಸ್ ಅನ್ನು ನಿಯಂತ್ರಿಸುತ್ತವೆ. ಉದಾಹರಣೆಗೆ, ನೀವು Pages ಆ್ಯಪ್ನಲ್ಲಿರುವ ಡಾಕ್ಯುಮಂಟ್ ಒಂದರಲ್ಲಿ ಕೊಲಾಬೊರೇಟ್ ಮಾಡುತ್ತಿದ್ದರೆ, Pages ಆ್ಯಪ್ನ ಸೆಟ್ಟಿಂಗ್ಸ್ಗೆ ಸಂದೇಶ ಆ್ಯಪ್ನ ಸೆಟ್ಟಿಂಗ್ಸ್ಗಿಂತ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದಾಗ್ಯೂ, ನೀವು ಯಾವುದೇ ಇತರೆ ಸಂದೇಶದೊಂದಿಗೆ ಮಾಡುವಂತೆಯೇ ಸಂಭಾಷಣೆಯಲ್ಲಿನ ಆಹ್ವಾನವನ್ನುಅನ್ಸೆಂಡ್ ಮಾಡಬಹುದು ಅಥವಾ ಡಿಲೀಟ್ ಮಾಡಬಹುದು.
ಪ್ರಮುಖ ಸೂಚನೆ: ನೀವು ಥ್ರೆಡ್ ಒಂದರಿಂದ ಆಹ್ವಾನವನ್ನು ಡಿಲೀಟ್ ಮಾಡಿದ ನಂತರ ಆ ಸಂಭಾಷಣೆಯು ಕೊಲಾಬೊರೇಶನ್ಗೆ ಸಂಬಂಧಿಸಿರುವುದಿಲ್ಲ, ಆದರೆ ಇದರಿಂದಾಗಿ ಸಹಭಾಗಿಗಳನ್ನು ಫೈಲ್ನಿಂದ ತೆಗೆದುಹಾಕಲಾಗುವುದಿಲ್ಲ. ವೀಕ್ಷಣೆ ಅಥವಾ ಎಡಿಟಿಂಗ್ ಸವಲತ್ತುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಆ್ಯಪ್ನಲ್ಲಿ ಭಾಗವಹಿಸುವವರ ಆ್ಯಕ್ಸೆಸ್ ಅನ್ನು ಪರಿಶೀಲಿಸಿ.